ಮ್ಯಾನಿಫೆಸ್ಟೊ

"ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಅಭಿವೃದ್ಧಿ ಕಾರ್ಯಕ್ರಗಳ ಪ್ರಣಾಳಿಕೆ"

 1. ಭಾರತ ದೇಶದ ರಾಜಕೀಯದಲ್ಲಿ, ಭಾರತ ದೇಶದ ಆಡಳಿತದಲ್ಲಿ ಮೌಲಿಕ ಬದಲಾವಣೆಗಳನ್ನು ತರುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಮುಖ್ಯ ಗುರಿ.
 2. "ಆತ್ಮಜ್ಞಾನ ಉಳ್ಳ ಮೇಧಾವಿಗಳಿಗೆ ಮಾತ್ರವೇ ರಾಜ್ಯಾಧಿಕಾರ ಬರಬೇಕು: ಆತ್ಮ ವಿಜ್ಞಾನ ಬಲದಿಂದ ಆಡಳಿತ ಅಧಿಕಾರವನ್ನು ನಡೆಸುವುದೇ ಪಿರಮಿಡ್ ಪಾರ್ಟಿ ಅಫ್ ಇಂಡಿಯಾದ ಪ್ರಥಮ ಕರ್ತವ್ಯ.
 3. ರಹಸ್ಯ ಬ್ಯಾಲೆಟ್ ಪದ್ಧತಿಯಲ್ಲಿ ಓಟಿಂಗ್ ಮೂಲಕ ಚುನಾವಣೆಯನ್ನು ನಡೆಸುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಪ್ರಥಮ ಕರ್ತವ್ಯ.
 4. ಸಭ್ಯ ಸಮಾಜದಲ್ಲಿ ಇರುವ ಜನ ಸಮೂಹಕ್ಕೆ ವಿರೋಧಗಳು ಇಲ್ಲದೇ ರಾಸ್ತಾರೋಕೋಗಳು, ಬಂದ್, ವಿಧ್ವಂಸಕ ಕೃತ್ಯಗಳನ್ನು ನಿರ್ಮೂಲನಗೊಳಿಸುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಕರ್ತವ್ಯ.
 5. ಪಿರಮಿಡ್ ಪಾರ್ಟಿ ಅಫ್ ಇಂಡಿಯಾದಲ್ಲಿ ತಪ್ಪಿತಸ್ಥರು, ಕಳ್ಳರು ಇರುವುದಿಲ್ಲ. ಶಾಶ್ವತವಾಗಿರುವುದು ಆತ್ಮಧ್ಯಾನಿಗಳು, ಆತ್ಮಜ್ಞಾನಿಗಳು ಮಾತ್ರವೇ.
 6. ನಿಷ್ಪಕ್ಷಪಾತ ಧೋರಣೆಯಲ್ಲಿ ಪ್ರಜಾಪರವಾಗಿ ಚುನಾವಣೆಗಳು ನಿರ್ವಹಿಸುವ ಹಾಗೆ ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಉದ್ದೇಶ.
 7. ಜಾತಿ, ಮತ, ಬೇಧರಹಿತ ಸಮಾಜ ಸ್ಥಾಪನೆಯೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಗುರಿ.
 8. "ನನ್ನದು" ಎನ್ನುವ ಸ್ವಾರ್ಥ ಪೂರಿತ ಪಾರ್ಟಿ ಅಲ್ಲ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ, "ನಮ್ಮದು" ಎನ್ನುವ ಸಮಾನ ಸಮಾಜ ನಿರ್ಮಾಣ ಪಾರ್ಟಿ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ.
 9. ಇನ್‌ಫರ್ಮೇಷನ್ ಟೆಕ್ನಾಲಜಿ ಇನ್ನೂ ಅಕವಾಗಿ(Availability) ಕೈಗೆ ಎಟಕುವ ಹಾಗೆ ಮಾಡಿ, ಸಾಮಾನ್ಯ ಪ್ರಜೆಗಳ ಶೀಘ್ರ ಅಭಿವೃದ್ಧಿಯಾಗುವ ಹಾಗೆ ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಗುರಿ.
 10. ಸಾರಿಗೆ ಮತ್ತು ಉದ್ಯಮ ಕ್ಷೇತ್ರಗಳನ್ನು ಇನ್ನೂ ಹೆಚ್ಚಾಗಿ ಅಭಿವೃದ್ಧಿ ಪಡಿಸಿ ಪ್ರಗತಿ ಪಥದ ಕಡೆ ನಡೆಸುವ ಪಾರ್ಟಿಯೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ.
 11. ಸಾಮಾಜಿಕ, ಆರ್ಥಿಕ ಅಸಮಾನತೆಗಳನ್ನು ನಿವಾರಿಸಿ ಸರಿ ಸಮಾನವಾದ ಸ್ಥಾಪನೆಗೆ ಕೃಷಿ ಮಾಡುವ ಪಾರ್ಟಿಯೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ.
 12. ಕುಟಿಲತ್ವ, ಅಸೂಯೆ, ಕುತಂತ್ರಗಳಿಂದ ಪ್ರಜೆಗಳನ್ನು ವಿಭಜಿಸಿ ಆಡಳಿತ ನಡೆಸುವ ಧೋರಣೆಗಳನ್ನು ನಿರ್ಮೂಲನೆಗೊಳಿಸುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಗುರಿ.
 13. ಪ್ರಜಾಪ್ರಭುತ್ವದಲ್ಲಿರುವ ಎಲ್ಲಾ ರಂಗಗಳಲ್ಲೂ ಅನೀತಿಯನ್ನು ಬುಡಸಮೇತ ಕಿತ್ತುಹಾಕಿ, ದೇಶದಲ್ಲೆಲ್ಲಾ ಅಧಿಕಾರವನ್ನು, ಜಿಲ್ಲಾ ಮಟ್ಟ, ಮಂಡಲ ಮಟ್ಟ ಮತ್ತು ಗ್ರಾಮ ಮಟ್ಟಕ್ಕೆ ಕೇಂದ್ರೀಕರಿಸಿ, ಶೀಘ್ರಪರಿಹಾರ ಮಾರ್ಗಗಳನ್ನು ಪ್ರಜೆಗಳಿಗೆ ಒದಗಿಸಿಕೊಡುವುದು ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಗುರಿ.
 14. ಆಡಳಿತವನ್ನು ಕಾನೂನು ಪರವಾಗಿ ಮಾಡಿ ಪ್ರಜೆಗಳಿಗೆ ಸರ್ಕಾರವನ್ನು ಹತ್ತಿರಕ್ಕೆ ತರುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಧ್ಯೇಯ.
 15. ವಿದ್ಯಾಭ್ಯಾಸ, ವೈದ್ಯಕೀಯ, ನಾಗರಿಕ ಸರಬರಾಜುಗಳು ಮತ್ತು ನೀರಿನ ಸರಬರಾಜು ಮಾರ್ಕೆಟ್‌ಗಳ ನಿರ್ವಹಣೆಯಲ್ಲಿ ಬಾಧ್ಯತೆಗಳನ್ನು ನೇರವಾಗಿ ಪ್ರಜೆಗಳಿಗೆ ಒದಗಿಸಿಕೊಡಲು - ಪ್ರಜೆಗಳಿಂದ ಪ್ರಜಾ ಸಮಿತಿಗಳನ್ನು ಏರ್ಪಾಟು ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ರೂಪಿಸುವ ಬೃಹತ್ ಕಾರ್ಯಕ್ರಮ.
 16. ಗ್ರಾಮಗಳೇ ದೇಶಕ್ಕೆ ಆಧಾರವೆಂದು ಹೇಳಿದ ಮಹಾತ್ಮಾಗಾಂಧೀಜಿ ಕನಸುಗಳನ್ನು ಕಂಡಿರುವ "ಗ್ರಾಮ ಸ್ವರಾಜ್" ಏರ್ಪಾಟು ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಗುರಿ.
 17. ಪ್ರತಿಯೊಂದು ಮನೆಗೂ ಶೌಚಾಲಯವನ್ನು ನಿರ್ಮಿಸಿ ಪರಿಪೂರ್ಣ ಪರಿಶುಭ್ರತೆಯನ್ನು ಅನುವು ಮಾಡಿಕೊಡಲು ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ತಪ್ಪದೇ ಕಾರ್ಯನಿರ್ವಹಿಸುತ್ತದೆ.
 18. ಗ್ರಾಮ ಪ್ರಜೆಗಳಿಗೆ ಸುರಕ್ಷಿತವಾದ ಕುಡಿಯುವ ನೀರನ್ನು ಒದಿಗಿಸಿ ಕೊಡುವುದು ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಪ್ರಧಾನ ಗುರಿ.
 19. ಸಾಮಾಜಿಕ, ಅರ್ಥಿಕ ಅಸಮಾನತೆಗಳು, ನಿರಕ್ಷರತೆಯನ್ನು ನಿರ್ಮೂಲನೆಗೊಳಿಸಿ ಪ್ರತಿ ಮಗುವಿಗೂ ತಪ್ಪದೇ ವಿದ್ಯೆಯನ್ನು ಒದಗಿಸುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಗುರಿ.
 20. ’ಖಾಸಗೀ’, ’ಸರಕಾರಿ’ ಎನ್ನುವ ವ್ಯತ್ಯಾಸಗಳಿಲ್ಲದೇ ಎಲ್ಲರಿಗೂ ಒಂದೇ ಪ್ರಮಾಣಗಳಿಂದ ಕೂಡಿರುವ ವಿದ್ಯೆಯನ್ನು ನೀಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಧ್ಯೇಯ.
 21. ದೇಶದಲ್ಲಿರುವ ಗ್ರಾಮಗಳ ಹಂತದಿಂದ, ಪಟ್ಟಣ, ನಗರಗಳ ಹಂತದವರೆಗೂ ಪ್ರತಿಯೊಬ್ಬರಿಗೂ ಉಚಿತ ಹೋಲಿಸ್ಟಿಕ್ ವೈದ್ಯ ಸೌಕರ್ಯ 24 ಗಂಟೆಗಳ ಕಾಲ ನೀಡುತ್ತಾ, ಅರ್ಹರಿಗೆ "ಹೋಲಿಸ್ಟಿಕ್ ವೈದ್ಯ" ಮಾನ್ಯತೆ ಇರುವ ಕಾರ್ಡುಗಳನ್ನು ನೀಡುವುದು ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಗುರಿ.
 22. ವ್ಯವಸಾಯ ರಂಗವನ್ನು ಲಾಭದಾಯಕವಾದ ಉದ್ಯಮವಾಗಿ ರೂಪಿಸಲು ರೈತರನ್ನು ಲಾಭದಾಯಕ ದಿಕ್ಕಿನಲ್ಲಿ ನಡೆಸಲು ಅನುಕೂಲವಾದ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ಬೇರ್ಪಡಿಸಿ ಲೋ ಓಲ್ಟೇಜ್ ಇಲ್ಲದೇ ಸರಬರಾಜು ಮಾಡಿ, "ರೈತರೇ ದೇಶಕ್ಕೆ ಬೆನ್ನೆಲುಬು" ಎಂದು ಹೇಳಿದ ಗಾಂಧೀ ಮಹಾತ್ಮನ ಘೋಷಣೆಯನ್ನು ನಿಜ ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಗುರಿ.
 23. ಕಡಿಮೆ ಬಡ್ಡಿಯಿಂದ ರೈತರಿಗೆ ಸಾಲ ಸೌಲಭ್ಯವನ್ನು ಕಲ್ಪಿಸಿ ರೈತರಿಗೆ ಸಹಾಯಕ್ಕೆ ನಿಲ್ಲುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಧ್ಯೇಯ.
 24. "ರೈತ-ಬಂಧು" ಹೆಸರಿನಲ್ಲಿ ಸರ್ಕಾರವೇ ಕಡಿಮೆ ದರಕ್ಕೆ ಶ್ರೇಷ್ಠವಾದ ಉತ್ತಮವಾದ ಬೀಜಗಳನ್ನು ವಿತರಿಸುವ ಹಾಗೆ ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಕರ್ತವ್ಯ.
 25. ಬೇಸಾಯ ವ್ಯವಸಾಯಕ್ಕೆ ಸಂಬಂಧಿಸಿದ ಪದ್ಧತಿಗಳನ್ನು ಎಲ್ಲಾ ರೈತರಿಗೆ ಸಿಗುವ ಹಾಗೆ ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಗುರಿ.
 26. "ರೈತರೇ ದೈವ" ಎನ್ನುವ ಹಾಗೇ ರೈತರು ಬೆಳೆಸಿದ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಕೊಡುವ ಹಾಗೆ ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಧ್ಯೇಯ.
 27. ನ್ಯಾಯ ವ್ಯವಸ್ಥೆಯನ್ನು ಸಂಪೂರ್ಣವಾಗಿ ಪರಿಶುದ್ಧಗೊಳಿಸಿ ಪ್ರಜೆಗಳ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹಾರವಾಗಲು ಪ್ರಜೆಗಳ ಮುಂದಕ್ಕೆ ಕೋರ್ಟುಗಳು ಹೋಗುವ ಹಾಗೆ ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಗುರಿ.
 28. ದೇಶದಲ್ಲಿ ರಾಜ್ಯಮಟ್ಟದಲ್ಲಾಗಲೀ, ರಾಷ್ಟ್ರಮಟ್ಟದಲ್ಲಾಗಲೀ ಹಿಂದುಳಿದ ಪ್ರದೇಶಗಳನ್ನು ಗುರುತಿಸಿ, ಅಧಿಕ ನಿಧಿಗಳನ್ನು ಹಂಚಿ ಅಭಿವೃದ್ಧಿಪಡಿಸುವುದೇ ಪಿರಮಿಡ್ ಪಾರ್ಟಿ ಅಫ್ ಇಂಡಿಯಾದ ಕರ್ತವ್ಯ.
 29. ದೇಶದಲ್ಲಿ ಅರ್ಹತೆ ಇರುವವರಿಗೆಲ್ಲಾ ಮತದಾನದ ಹಕ್ಕು ಕಲ್ಪಿಸಿ, ನಿಜವಾದ ಮತದಾರರನ್ನು ಗುರುತಿಸಲು ಪ್ರಸ್ತುತದಲ್ಲಿರುವ ಪಟ್ಟಿಯನ್ನು ಪರಿಪೂರ್ಣವಾಗಿ ಪರಿಷ್ಕರಣೆ ಮಾಡುವುದೇ ಪಿರಮಿಡ್ ಪಾರ್ಟಿ ಅಫ್ ಇಂಡಿಯಾದ ಧ್ಯೇಯ.
 30. ಕಂಪ್ಯೂಟರ್ ಯುಗವನ್ನು ಅಂದರೆ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರವನ್ನು ಅಭಿವೃದ್ಧಿಪಡಿಸಿ ಭಾರತ ದೇಶವನ್ನು ಪ್ರಗತಿ ಪಥದಲ್ಲಿ ನಡೆಸುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಮುಖ್ಯ ಕರ್ತವ್ಯ.
 31. ಭೂಮಿಗೆ ಸಂಬಂಧಿಸಿರುವ ರಾಜ್ಯಮಟ್ಟದಿಂದ ಕೇಂದ್ರಮಟ್ಟದ ವರೆಗೂ ಇರುವ ರಿಕಾರ್ಡುಗಳನ್ನು, ವಿವರಗಳನ್ನು ಇಂಟರ್‌ನೆಟ್‌ಗಳಲ್ಲಿ ಇರಿಸಿ ಯಾವಾಗಿಂದಾವಾಗಲೇ ಪ್ರಜೆಗಳಿಗೆ ಖಚಿತವಾದ ಸಮಾಚಾರ ತಿಳಿಯುವ ಹಾಗೆ ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಧ್ಯೇಯ.
 32. ಭಾರತ ದೇಶದಲ್ಲಿರುವ ಪ್ರಸ್ತುತ ಸಾಮಾಜಿಕ, ಆರ್ಥಿಕ, ರಾಜಕೀಯ ಪರಿಸ್ಥಿತಿಗಳಿಗೆ ಅನುಗುಣವಾಗಿ ಕಾನೂನನ್ನು ಸರಿಮಾಡುವುದಲ್ಲದೇ ಭಾರತ ರಾಜ್ಯಾಂಗವನ್ನು ಸರಿಪಡಿಸುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಗುರಿ.
 33. ಸ್ವಿಸ್ ಬ್ಯಾಂಕ್‌ಗಳಲ್ಲಿ ಇರುವ ಕೋಟ್ಯಾಂತರ ಕಪ್ಪು ಹಣವನ್ನು ಹೊರಗೆ ತೆಗೆದು ದೇಶದ ಅಭಿವೃದ್ಧಿಗೆ ಉಪಯೋಗಿಸುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಮುಖ್ಯ ಕರ್ತವ್ಯ.
 34. ಭಾರತ ದೇಶದಲ್ಲಿರುವ ಎಲ್ಲಾ ಅರಣ್ಯಗಳಲ್ಲಿರುವ ಅರಣ್ಯ ಸಂಪತ್ತನ್ನು ಮರಗಳನ್ನು ಅಕ್ರಮವಾಗಿ ರವಾನಿಸುವವರಿಂದ ಕಾಪಾಡಿ, ಹೊಸದಾಗಿ ಕಾಡುಗಳನ್ನು ಬೆಳೆಸುವ ಹಾಗೆ ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಧ್ಯೇಯ.

ಸಂಸ್ಥಾಪಕರು

ಬ್ರಹ್ಮರ್ಷಿ ಪತ್ರೀಜಿ

"ಉತ್ತಮ ಆಡಳಿತವನ್ನು ನೀಡಲು ಎನ್‍ಲೈಟನ್ಡ್ ಮಾಸ್ಟರ್ ಗಳು ಮಾತ್ರವೇ ಅರ್ಹರು. ಎನ್‍ಲೈಟನ್ಡ್ ಮಾಸ್ಟರ್ ಗಳನ್ನು ಮಾತ್ರವೇ ಆಯ್ಕೆಮಾಡೋಣ ಮತ್ತು ಚುನಾಯಿಸೋಣ."
-ಬ್ರಹ್ಮರ್ಷಿ ಪತ್ರೀಜಿ

Go to top