ಆಡಳಿತ

ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ "ಮೌಲಿಕ ಸಿದ್ಧಾಂತಗಳು"

1. "ಧ್ಯಾನ ಆರೋಗ್ಯ ಕೇಂದ್ರಗಳು"

ಭಾರತ ದೇಶದಲ್ಲಿರುವ ಎಲ್ಲಾ ರಾಜ್ಯಗಳಲ್ಲೂ ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದವರೆಗೂ "ಪಿರಮಿಡ್ ಧ್ಯಾನ ಆರೋಗ್ಯ ಕೇಂದ್ರಗಳನ್ನು" ಸ್ಥಾಪಿಸಿ ಧ್ಯಾನ, ಆಧ್ಯಾತ್ಮಿಕ, ವಿಜ್ಞಾನ ಗ್ರಂಥಾಲಯಗಳು ರೂಪಿಸಿ ಒಂದು ಪೈಸೆ ಖರ್ಚು ಇಲ್ಲದೇ ಆರೋಗ್ಯವನ್ನು ನೀಡುತ್ತಾ ಎಲ್ಲರನ್ನು ಆತ್ಮಜ್ಞಾನಪರವಾಗಿ ತಯಾರುಮಾಡುವುದೇ ಪಿರಮಿಡ್ ಆಫ್ ಇಂಡಿಯಾದ ಮುಖ್ಯ ಕರ್ತವ್ಯ.

2. "ಸಸ್ಯಾಹಾರ - ಅಹಿಂಸೆ"

ಭಾರತ ದೇಶದಲ್ಲಿ ಪ್ರತಿಯೊಬ್ಬರನ್ನು ಸಸ್ಯಾಹಾರಿಗಳನ್ನಾಗಿ ಮಾಡಿ, ಹಿಂಸೆಯನ್ನು ಬುಡ ಸಮೇತ ನಿರ್ಮೂಲ ಮಾಡುವುದು... ಸಸ್ಯಾಹಾರದ ವಿಶಿಷ್ಟತೆಯನ್ನು ವಿವರವಾಗಿ ಪ್ರಚಾರಮಾಡಿ ಪ್ರಜೆಗಳನ್ನು ಉತ್ತೇಜಿತರನ್ನಾಗಿ ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಗುರಿ.

3."ಪರಿಶುದ್ಧ ಭಾರತ"

ದೇಶದಲ್ಲಿರುವ ಎಲ್ಲಾ ರಾಜ್ಯಗಳಲ್ಲಿ... ಗ್ರಾಮಗಳ ಹಂತದಿಂದ ಪಟ್ಟಣ ನಗರಗಳ ಹಂತದವರೆಗೂ.. ಪ್ರತಿಯೊಂದು ಕಡೆ ಪರಿಶುದ್ಧತೆಯನ್ನು ಪಾಲಿಸಿ, ಪ್ರತಿ ವ್ಯಕ್ತಿಯನ್ನು ಅದರಲ್ಲಿ ಭಾಗಿಗಳನ್ನಾಗಿ ಮಾಡಿ, ಭಾರತ ದೇಶವನ್ನು "ಪರಿಶುದ್ಧ ಭಾರತ" ವಾಗಿ ರೂಪುಗೊಳಿಸುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಅತಿ ಮುಖ್ಯಗುರಿ.

4. "ಯುವಜನರ ಭವಿಷ್ಯ - ಸ್ವಯಂ ಉದ್ಯೋಗ"

ಭಾರತದೇಶದಲ್ಲಿರುವ ಯುವಜನರಲ್ಲಿ ಆತ್ಮಜ್ಞಾನವನ್ನು ತುಂಬಿ ಅವರಿಗೆ ಪ್ರಾಪಂಚಿಕ ಕನಿಷ್ಠ ವಿದ್ಯಾಭ್ಯಾಸಗಳ ಜೊತೆ "ಸ್ವಯಂ ಉದ್ಯೋಗಕ್ಕೆ" ಸಂಬಂಧಿಸಿದ ವೃತ್ತಿಪರವಾದ ಪ್ರಾವೀಣ್ಯತೆಯನ್ನು ಹೇಳಿಕೊಟ್ಟು, ಅವರ ಕಾಲುಗಳ ಮೇಲೆ ಅವರು ನಿಲ್ಲುವ ಹಾಗೆ ಆತ್ಮಸ್ಥೈರ್ಯವನ್ನು ವೃದ್ಧಿಗೊಳಿಸಬೇಕು. ಅಷ್ಟೆ ಅಲ್ಲದೆ, ಅವರನ್ನು ಪ್ರೋತ್ಸಾಹಿಸುತ್ತಾ ಅವರಿಗೆ ಎಲ್ಲಾ ಹಂತಗಳಲ್ಲಿನ ರಾಜಕೀಯ ವೇದಿಕೆಗಳಲ್ಲಿ ಕೂಡ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಗುರಿ.

5."ಮಹಿಳೆಯರಿಗೆ ಸರಿ ಸಮಾನವಾದ ಗೌರವ"

ಭಾರತ ದೇಶದಲ್ಲಿ .... ಗ್ರಾಮ ಹಂತದಿಂದ ಕೇಂದ್ರ ಹಂತದವರೆಗೂ... ಮಹಿಳೆಯರಿಗೆ ಎಲ್ಲಾ ರಂಗಗಳಲ್ಲೂ ಸರಿಸಮಾನವಾದ ಗೌರವ ಕಲ್ಪಿಸುತ್ತಾ ಎಲ್ಲಾ ಪ್ರಮುಖ ಸಂಘಗಳಲ್ಲಿ 5೦% ಪ್ರಾಮುಖ್ಯತೆ ಕೊಡುವುದೇ ಮತ್ತೊಂದು ಪ್ರಧಾನ ಗುರಿ. ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಮಾತ್ರವೇ ಪ್ರಪಂಚದಲ್ಲಿ ಮಹಿಳೆಯರಿಗೆ ಅತ್ಯಂತ ಪ್ರಾಧಾನ್ಯತೆಯನ್ನು ನೀಡುವ ದೊಡ್ಡ ಪಾರ್ಟಿ.

6."ರೋಟಿ, ಕಪಡಾ, ಮಕಾನ್ ಔರ್ ಧ್ಯಾನ್ ಜ್ಞಾನ್"

ಸಂಪೂರ್ಣ ಭಾರತದೇಶದಲ್ಲಿ ಜಾತಿ, ಮತ, ವರ್ಗ, ಬೇಧ ಭಾವವಿಲ್ಲದೇ ಪ್ರತಿಯೊಬ್ಬ ಬಡವನಿಗೂ ರೋಟೀ, ಕಪಡಾ, ಮಕಾನ್ (ಅನ್ನ , ಬಟ್ಟೆ, ವಸತಿ) ಜೊತೆ ಧ್ಯಾನ ಜ್ಞಾನವನ್ನು ಹಂಚುವ ಒಂದೇ ಒಂದು ಪಾರ್ಟಿ ಪಿರಮಿಡ್ ಪಾರ್ಟಿ ಅಫ್ ಇಂಡಿಯಾ.

7. "ಖೇಲ್, ಸಂಗೀತ, ನೃತ್ಯ್ ಔರ್ ಆತ್ಮಜ್ಞಾನ್"

ಅದೇ ತರಹ ಆಟಗಳಿಂದ, ಸಂಗೀತದಿಂದ, ಸಾಹಿತ್ಯದಿಂದ ಮತ್ತು ಆತ್ಮಜ್ಞಾನದಿಂದ ದೇಶದಲ್ಲಿ ಎಲ್ಲರನ್ನು ಆತ್ಮಜ್ಞಾನರನ್ನಾಗಿಸುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಮುಖ್ಯ ಉದ್ದೇಶ.

8."ಭಿಕ್ಷುಕ ವೃತ್ತಿ ನಿರ್ಮೂಲನೆ - ಉದ್ಯೋಗ ನೀಡಿಕೆ"

ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವ ಭಿಕ್ಷುಕರನ್ನು ಗುರುತಿಸಿ ಬಿಕ್ಷುಕ ವೃತ್ತಿಯನ್ನು ಬುಡ ಸಮೇತ ನಿರ್ಮೂಲನೆ ಮಾಡಿ ಅವರಿಗೆ ಪ್ರತ್ಯೇಕ ನಿವಾಸಗಳನ್ನು ರೂಪಿಸಿಕೊಟ್ಟು, ಸ್ವಯಂ ಉದ್ಯೋಗ ಕಲ್ಪಿಸುವುದು ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಮೂಲಕ ಮಾಡಬೇಕೆಂದು ಸಂಕಲ್ಪಿಸಿದ ಅಪೂರ್ವ, ಅದ್ಭುತ ಕಾರ್ಯಕ್ರಮ.

9."ರಾಜಕೀಯದ ಸೇವೆಯ ಅರಿವು"

ಪ್ರತಿ ವ್ಯಕ್ತಿಯಲ್ಲಿ.. ಮುಖ್ಯವಾಗಿ ಯುವಕರಲ್ಲಿ.. ವಿದ್ಯಾರ್ಥಿ ದೆಸೆಯಿಂದಲೇ ರಾಜಕೀಯ ರಂಗದಲ್ಲಿ ಸೇವೆಯ ಅರಿವನ್ನು ಬೆಳಗಿಸಿ, ಅವರನ್ನು ಸಮಾಜದ ಸೇವೆಯ ಶಾಸ್ತ್ರಯೋಧರನ್ನಾಗಿ ತಯಾರು ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಗುರಿ.

ಸಂಸ್ಥಾಪಕರು

ಬ್ರಹ್ಮರ್ಷಿ ಪತ್ರೀಜಿ

"ಉತ್ತಮ ಆಡಳಿತವನ್ನು ನೀಡಲು ಎನ್‍ಲೈಟನ್ಡ್ ಮಾಸ್ಟರ್ ಗಳು ಮಾತ್ರವೇ ಅರ್ಹರು. ಎನ್‍ಲೈಟನ್ಡ್ ಮಾಸ್ಟರ್ ಗಳನ್ನು ಮಾತ್ರವೇ ಆಯ್ಕೆಮಾಡೋಣ ಮತ್ತು ಚುನಾಯಿಸೋಣ."
-ಬ್ರಹ್ಮರ್ಷಿ ಪತ್ರೀಜಿ

Go to top