"ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಉಗಮ"

1999ನೇ ವರ್ಷ ಫೆಬ್ರವರಿ 25

 • ಪಿರಮಿಡ್ ಸೊಸೈಟಿ ಮಾಸ್ಟರ್‌ಗಳಿಗೆ, ಆತ್ಮಧ್ಯಾನಿಗಳಿಗೆ ಈ ದಿನ ಒಳ್ಳೆಯ ಹಬ್ಬದ ದಿನ !
 • ವಿಶ್ವದ ರಾಜಕೀಯಚರಿತ್ರೆಯಲ್ಲಿ ಸುವರ್ಣಾಕ್ಷರಗಳಿಂದ ಬರೆಯಬಹುದಾದ ಶ್ರೇಷ್ಠ ದಿನ !!
 • ಆ ದಿನಗಳಲ್ಲಿ ಸಾಕ್ರಟೀಸ್ ಮಹಾನುಭಾವರು ಕಂಡ ಬಂಗಾರದಂತ ಕನಸು ಆ ದಿನವೇ!
 • ಬುದ್ಧ ಭಗವಾನರು ಸೂಚಿಸಿದ ಮೈತ್ರೇಯ ಬುದ್ಧನ ಪುನರಾಗಮ ಆ ದಿನವೇ !!
 • ಜೀಸಸ್ ಪ್ರವಚನ ಮಾಡಿದ ತನ್ನ "ಪುನರಾಗಮನ" (ಪುನಃ ಮರಳಿಬರುವುದು) ಕೂಡಾ ಆ ದಿನವೇ !!!

ಇಂದಿನ ದೇಶಿಯ ರಾಜಕೀಯಗಳು ಎಷ್ಟು ಅಸ್ತವ್ಯಸ್ತವಾಗಿ ಇದೆಯೋ ಎಲ್ಲರಿಗೂ ಗೊತ್ತಿದೆ: ಅದಕ್ಕೆ ಕಾರಣ "ಆತ್ಮಜ್ಞಾನವುಳ್ಳ ಮೇಧಾವಿಗಳು" ರಾಜಕೀಯದಿಂದ ದೂರವಾಗಿರುವುದು.

"ಆತ್ಮಜ್ಞಾನವಿಲ್ಲದೇ ಯಾರೂ ಆತ್ಮಜ್ಞಾನವುಳ್ಳ ಮೇಧಾವಿಗಳು ಆಗಲಾರರು". "ಆತ್ಮಜ್ಞಾನವುಳ್ಳ ಮೇಧಾವಿಗಳು ಆಳ್ವಿಕೆ ನಡೆಸಿದಾಗಲೇ ಪ್ರಪಂಚಕ್ಕೆ ಒಳ್ಳೆಯದಾಗುತ್ತದೆ" ಎಂದು ಸಾಕ್ರಟೀಸ್ ಮಹಾನುಭಾವರು ಬೋಧಿಸಿದರು... ಕನಸುಗಳನ್ನು ಕಂಡರು. ಆ ಮಹಾನುಭಾವ ಕಂಡ ಕನಸುಗಳನ್ನು ನಿಜ ಮಾಡಬೇಕೆಂಬ ದೃಢ ಸಂಕಲ್ಪದಿಂದಲೇ ಅವರ ಉಪದೇಶವನ್ನೇ ಜೀವನಾಡಿಯಾಗಿ ಮಾಡಿಕೊಂಡು "ಪಿರಮಿಡ್ ಪಾರ್ಟಿ ಆಫ್ ಇಂಡಿಯಾ" ಆರಂಭಗೊಂಡಿದೆ !

ಆ ಕ್ಷಣ ಭರತ ಮಾತೆ ಪುಲಕಿತಗೊಂಡಳು!!

 

"ಪಿರಮಿಡ್ ಪಾರ್ಟಿ ಉಗಮದ ಉದ್ದೇಶ"

 • ಸರಿಯಾದ ಆಧ್ಯಾತ್ಮಿಕತೆಗೆ ಅಂಕಿತವಾದ ಎಲ್ಲಾ ಮಹಾನುಭಾವರಿಗೂ "ಒಂದೇ ಧ್ಯಾನ ವೇದಿಕೆ" ಮೇಲೆ ಒಟ್ಟುಗೂಡಿಸಲಿಕ್ಕಾಗಿ "ಪಿರಮಿಡ್ ಧ್ಯಾನ ಕೇಂದ್ರಗಳು" ದೇಶದಾದ್ಯಂತ ರೂಪುಗೊಳ್ಳುತ್ತಿವೆ.
 • "ಭಾರತ ದೇಶದಲ್ಲಿ ಅತ್ಯಲ್ಪ ಸಮಯದಲ್ಲಿ ಆಧ್ಯಾತ್ಮಿಕ ರಾಜ್ಯ ಸ್ಥಾಪನೆ ಆಗಬೇಕು" ಎಂದು ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಸಂಕಲ್ಪಿಸಿದೆ. ಅದರ ಭಾಗವಾಗಿಯೇ 1999ನೇ ವರ್ಷ ಸಾರ್ವತ್ರಿಕ ಚುನಾವಣೆಯಲ್ಲಿ ಈ ಪಕ್ಷವು "ರಂಗಪ್ರವೇಶ" ಮಾಡಿದೆ. ಹಾಗೆಯೇ, 2004 ಸಾರ್ವತ್ರಿಕ ಚುನಾವಣೆಯಲ್ಲಿ ಕೂಡ ಇನ್ನೂ ವಿಶಾಲವಾಗಿ ಭಾಗವಹಿಸಿದೆ... ಅದೇ ತರಹ 2009ನೇ ವರ್ಷದಲ್ಲಿ ಕೂಡ ಮುಂದೆ ಹೆಜ್ಜೆ ಹಾಕಿದೆ.

 

"ಆಧ್ಯಾತ್ಮಿಕ ರಾಜ್ಯ ಸ್ಥಾಪನೆ"

 • ಈ ಪ್ರಯತ್ನಗಳಿಂದ "ಆಧ್ಯಾತ್ಮಿಕ ರಾಜ್ಯ" ರೂಪುಗೊಳ್ಳಬೇಕೆಂದು ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಒಂದು ಚಿಕ್ಕ ದೀಪವನ್ನು ಬೆಳೆಗಿಸಿತು. ಭವಿಷ್ಯತ್ತಿನಲ್ಲಿ ಆ ಚಿಕ್ಕ ದೀಪವೇ ನೂರಾರು, ಸಾವಿರಾರು, ಲಕ್ಷಾಂತರ, ಕೋಟ್ಯಾಂತರ ದೀಪಗಳನ್ನು ಬೆಳೆಗಿಸಿ ಸಾಮಾನ್ಯ ಮಾನವರ ಆಶಯ ಕೂಡ ಆಗಿರುವ "ಆಧ್ಯಾತ್ಮಿಕ ರಾಜ್ಯ ಸ್ಥಾಪನೆ" ಸಾಧಿಸಬೇಕು. ಪ್ರಜೆಗಳ ಜೀವನಗಳಲ್ಲಿ ಬೆಳಕನ್ನು ತುಂಬಿಸಬೇಕು.
 • "ಆತ್ಮಜ್ಞಾನವುಳ್ಳ ಮೇಧಾವಿಗಳಿಗೇ ಆಡಳಿತಾರ್ಹತೆ"
 • ಪಿರಮಿಡ್ ಪಾರ್ಟಿ ಆಫ್ ಇಂಡಿಯಾದಿಂದ "ಧ್ಯಾನದಿಂದ ಶರೀರಕ್ಕೆ, ಮಾನಸಿಕ ಆರೋಗ್ಯ" ಎನ್ನುವುದು ಜನಜೀವನ ನದಿಯೋಪಾದಿಯಲ್ಲಿ ಅಂತರ್ಭಾಗವಾಗುತ್ತದೆ.
 • ಪಿರಮಿಡ್ ಪಾರ್ಟಿ ಆಫ್ ಇಂಡಿಯಾದಿಂದ "ಆತ್ಮಜ್ಞಾನ, ಆತ್ಮಶಾಸ್ತ್ರಗಳನ್ನು" ತಮ್ಮದಾಗಿಸಿಕೊಂಡು ಪ್ರಜೆಗಳೆಲ್ಲಾ ಆತ್ಮಜ್ಞಾನಿಗಳಾಗುತ್ತಾರೆ.
 • ಆತ್ಮಜ್ಞಾನಿಗಳಾದಾಗಲೇ ಮೇಧಾವಿಗಳು ಆಡಳಿತ ನಡೆಸುವ ಅರ್ಹತೆಯನ್ನು ಹೊಂದಿ ಅಧಿಕಾರವನ್ನು ಸಮರ್ಥವಾಗಿ ಕೈಹಿಡಿಯಬಲ್ಲವರಾಗುತ್ತಾರೆ.

 

"ಆರೋಗ್ಯವೇ ಮಹಾಭಾಗ್ಯ "

 • ಭಾರತ ದೇಶದಲ್ಲಿ ಪಿರಮಿಡ್ ಪಾರ್ಟಿ ಆಫ್ ಇಂಡಿಯಾ ಮುಖಾಂತರ-ಧ್ಯಾನದಿಂದ ಪ್ರಜೆಗಳೆಲ್ಲರೂ ಆರೋಗ್ಯವಂತರಾಗಿ "ಆರೋಗ್ಯವೇ ಮಹಾಭಾಗ್ಯ", "ನಮ್ಮ ಆರೋಗ್ಯ ನಮ್ಮ ಕೈಯಲ್ಲೆ" ಎನ್ನುವ ಸೂಕ್ತಿಗೆ ಪರಮಾರ್ಥವನ್ನು ಪಡೆಯುವಂತೆ ಮಾಡುವುದೇ ನಮ್ಮ ಧ್ಯೇಯ.
 • ಆದುದರಿಂದ, ಜನಜೀವನ ನದಿಯೋಪಾದಿಯಲ್ಲಿ, ಅವರ ಜೀವನ ವಿಧಾನಗಳಲ್ಲಿ ಒಂದು ಮಹಾ ಆರೋಗ್ಯಕರವಾದ, ಒಂದು ಮಹಾಶುಭಕರವಾದ ಬದಲಾವಣೆ ಬರುತ್ತದೆ.
 • ಆ ಬದಲಾವಣೆಯಿಂದಲೇ "ಆಧ್ಯಾತ್ಮಿಕ ರಾಜ್ಯ" ಸ್ಥಾಪನೆ ನಡೆಯುವ ಹಾಗೆ ಮಾಡುವುದೇ ಪಿರಮಿಡ್ ಪಾರ್ಟಿ ಆಫ್ ಇಂಡಿಯಾದ ಗುರಿ.

ಸಂಸ್ಥಾಪಕರು

ಬ್ರಹ್ಮರ್ಷಿ ಪತ್ರೀಜಿ

"ಉತ್ತಮ ಆಡಳಿತವನ್ನು ನೀಡಲು ಎನ್‍ಲೈಟನ್ಡ್ ಮಾಸ್ಟರ್ ಗಳು ಮಾತ್ರವೇ ಅರ್ಹರು. ಎನ್‍ಲೈಟನ್ಡ್ ಮಾಸ್ಟರ್ ಗಳನ್ನು ಮಾತ್ರವೇ ಆಯ್ಕೆಮಾಡೋಣ ಮತ್ತು ಚುನಾಯಿಸೋಣ."
-ಬ್ರಹ್ಮರ್ಷಿ ಪತ್ರೀಜಿ

Go to top